ಶ್ರೀ ಸ್ವಣ೯ವಲ್ಲೀ ಮಹಾಸಂಸ್ಥಾನದ ಅಂಗಸಂಸ್ಥೆಯಾದ ಸ್ವಣ೯ ರಶ್ಮೀ ಪ್ರತಿಷ್ಠಾನವು ಆಯ್ ಎ ಎಸ್ ಮುಂತಾದ ನಾಗರೀಕ ಸೇವಾ ಪರೀಕ್ಷೆಗಳ ವಿದ್ಯಾಥಿ೯ಗಳ ಅನುಕೂಲಕ್ಕಾಗಿ ಸಿದ್ಧಪಡಿಸಿದ ಅಂತಜಾ೯ಲವನ್ನು ದಿನಾಂಕ 16-05-2025 ರಂದು ಶ್ರೀಮದ್ ಜಗದ್ಗುರು ಶಂಕರಾಚಾಯ೯ ಶ್ರೀ ಗಂಗಾಧರೇಂದ್ರ ಸರಸ್ವತಿ ಮಹಾಸ್ವಾಮಿಗಳು ಬೆಂಗಳೂರಿನಲ್ಲಿ ಚಾಲನೆ ನೀಡಿ ಲೋಕಾಪ೯ಣೆ ಮಾಡಿದರು. ನಮ್ಮ ಗ್ರಾಮೀಣ ಭಾಗದ ಪ್ರತಿಭಾವಂತ ವಿದ್ಯಾಥಿ೯ಗಳು ಈ ಅಂತಜಾ೯ಲದ ಪ್ರಯೋಜನ ಪಡೆದುಕೊಂಡು ದೇಶದ ಅತ್ಯುನ್ನತ ನಾಗರೀಕ ಸೇವಾ ಅಧಿಕಾರಿಗಳಾಗಿ ನಮ್ಮ ಸಮಾಜಕ್ಕೆ ಅಮೂಲ್ಯ ಕೊಡುಗೆ ನೀಡಲಿ ಎಂದು ಪರಮಪೂಜ್ಯ ಶ್ರೀಗಳು ಆಶಯ ವ್ಯಕ್ತ ಪಡಿಸಿದರು. ಸ್ವಣ೯ ರಶ್ಮೀ ಪ್ರತಿಷ್ಠಾನವು ನಡೆಸುವ ತರಬೇತಿ, ಜಾಗೃತಿ ಕಾಯ೯ಕೃಮಗಳ ಮಾಹಿತಿಗಳ ಜೊತೆಗೆ, ಕೇಂದ್ರ ಮತ್ತು ಕನಾ೯ಟಕ ಲೋಕಸೇವಾ ಆಯೋಗಗಳು ನಡೆಸುವ ನಾಗರೀಕ ಸೇವೆಗಳ ಸ್ಪಧಾ೯ತ್ಮಕ ಪರೀಕ್ಷೆಗಳ ಸ್ವರೂಪ, ಪಠ್ಯಸೂಚಿ, ಉಪಯುಕ್ತ ಗ್ರಂಥಗಳು, ಲೇಖನಗಳು ಮುಂತಾದ ಹಲವಾರು ಮಾಹಿತಿಗಳನ್ನು ಹೊಂದಿರುವ ಈ ವೆಬ್ ಸೈಟ್ ನ್ನು ಆಸಕ್ತ ವಿದ್ಯಾಥಿ೯ಗಳು http//swarnarashmiias. com ನ್ನು ಭೇಟಿ ಮಾಡಬಹುದು ಎಂದು ಪ್ರತಿಷ್ಠಾನದ ಕಾಯಾ೯ಧ್ಯಕ್ಷ ಶ್ರಿ ಎಸ್ ಎಂ ಹೆಗಡೆ ಗೌರೀಬಣ್ಣಿಗೆ ತಿಳಿಸಿದರು. ಕಳೆದ ವಷ೯ದಂತೆಯೇ ಈ ವಷ೯ವೂ ಸಹ ಶಿರಸಿ ಸುತ್ತಮುತ್ತಲಿನ ನಾಲ್ಕು ಪ್ರೌಢ ಶಾಲೆಗಳ ವಿದ್ಯಾಥಿ೯ಗಳಿಗೆ ಆಯ್ ಎ ಎಸ್ ಮುಂತಾದ ನಾಗರೀಕ ಸೇವಾ ಪರೀಕ್ಷೆಗಳ ಬುನಾದಿ ತರಬೇತಿಯನ್ನು ಬರುವ ಜುಲೈ ಮೊದಲ ವಾರದಿಂದ ಪ್ರಾರಂಭಿಸಲಾಗುವುದೆಂದು ಅವರು ತಿಳಿಸಿದರು.
ಬೆಂಗಳೂರಿನ ಚಿಕ್ಕಬೆಟ್ಟಹಳ್ಳಿ ಯ ಶ್ರೇಯೋಧಾಮದ ಅಭ್ಯುದಯದಲ್ಲಿ ಪ್ರತಿಷ್ಠಾನದ ಗೌರವಾಧ್ಯಕ್ಷರಾದ ಪರಮಪೂಜ್ಯ ಶ್ರೀ ಗಂಗಾಧರೇಂದ್ರ ಮಹಾಸ್ವಾಮಿಗಳ ದಿವ್ಯ ಉಪಸ್ಥಿತಿಯಲ್ಲಿ ನಡೆದ ಸಭೆಯಲ್ಲಿ , ವೆಬ್ ಸೈಟ್ ಸಿದ್ಧಪಡಿಸಿದ ಯಲ್ಲಾಪುರದ ಶ್ರೀ ಈಶ್ವರ ಭಟ್ಟರನ್ನು ಪೂಜ್ಯ ಶ್ರೀಗಳು ಶಾಲು ನೀಡಿ ಗೌರವಿಸಿದರು. ಶ್ರೀ ಸ್ವಣ೯ವಲ್ಲೀ ಸೇವಾ ಪ್ರತಿಷ್ಠಾನದ ಅಧ್ಯಕ್ಷರಾದ ಶ್ರೀ ಜಿ. ವಿ. ಹೆಗಡೆ ಹುಳಗೋಳ, ಸೀಮಾ ಪರಿಷತ್ ನ ಅಧ್ಯಕ್ಷರಾದ ಶ್ರೀ ರಮೇಶ ಭಟ್ಟ ವಾನಳ್ಳಿ, ಶ್ರೀ ನರಾಹರಿ ಹೆಗಡೆ ಹಾಗೂ ಇನ್ನಿತರ ಪದಾಧಿಕಾರಿಗಳು ಈ ಸಂದಭ೯ದಲ್ಲಿ ಉಪಸ್ಥಿತರಿದ್ದರು.